ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ರಾಜ್ಯ ಪ್ರಶಸ್ತಿ ವಿಜೇತ, ತೆ೦ಕುತಿಟ್ಟಿನ ಕಲಾವಿದ ಶ್ರೀ ಪುತ್ತೂರು ಶೀನಪ್ಪ ಭ೦ಡಾರಿ ಇನ್ನಿಲ್ಲ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜೂನ್ 24 , 2013
ರಾಜ್ಯ ಪ್ರಶಸ್ತಿ ವಿಜೇತ, ತೆ೦ಕುತಿಟ್ಟಿನ ಪ್ರಸಿಧ್ಧ ಕಲಾವಿದರಾದ ಶ್ರೀ ಪುತ್ತೂರು ಶೀನಪ್ಪ ಭ೦ಡಾರಿ (88) ರವರು, ಅಲ್ಪ ಕಾಲದ ಅಸೌಖ್ಯದಿ೦ದಾಗಿ ಪುತ್ತೂರಿನ ಆಸ್ಪತ್ರೆಯೊ೦ದರಲ್ಲಿ (ಜೂನ್ 24ರ೦ದು) ನಿಧನ ಹೊ೦ದಿದ್ದಾರೆ. ಶ್ರೀಯುತರು ಧರ್ಮಪತ್ನಿ, 5 ಗ೦ಡು ಮಕ್ಕಳು, 2 ಹೆಣ್ಣು ಮಕ್ಕಳು ಹಾಗೂ ಅಪಾರ ಸ೦ಖ್ಯೆಯ ಅಭಿಮಾನಿಗಳನ್ನು ಅಗಲಿರುತ್ತಾರೆ.

ದೂಮಪ್ಪ ಹಾಗೂ ದಾರಮ್ಮ ದ೦ಪತಿಗಳಿಗೆ ಜನಿಸಿದ ಶ್ರಿಯುತರು, 5ನೇ ತರಗತಿಗೇ ವಿಧ್ಯಾಭ್ಯಾಸವನ್ನು ಮೊಟಕುಗೊಳಿಸಿ, ಬೋವಿಕಾನದ ಯಕ್ಷಗಾನ ಕಲಿಕಾ ಕೇ೦ದ್ರದಲ್ಲಿ ತರಬೇತಿಯನ್ನು ಪಡೆದು, ಮು೦ದೆ ಕದ್ರಿ, ಕೂಡ್ಲು, ಧರ್ಮಸ್ಥಳ, ಸುಬ್ರಹ್ಮಣ್ಯ ಮು೦ತಾದ ಹಲವು ಮೇಳಗಳಲ್ಲಿ ಪ್ರಮುಖ ವೇಷಧಾರಿಯಾಗಿ ಸೇವೆ ಸಲ್ಲಿಸಿದರು.

ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಶ್ರಿಯುತರು, ಕೌರವ, ಕ೦ಸ, ಹಿರಣ್ಯಕಶಿಪು, ಶು೦ಭ ಮು೦ತಾದ ಪಾತ್ರಗಳಿಗೆ ಪ್ರಸಿಧ್ಧಿಯಾಗಿರುತ್ತಾರೆ. ಇವರ ಪುತ್ರ ಶ್ರೀ ಪುತ್ತೂರು ಶ್ರೀಧರ ಭ೦ಡಾರಿಯವರು ಪ್ರಸ್ತುತ ತೆ೦ಕುತಿಟ್ಟಿನಲ್ಲಿ ಅಗ್ರಮಾನ್ಯ ಕಲಾವಿದರಾಗಿದ್ದು, ಪು೦ಡು ವೇಷಗಳಿಗೆ ಪ್ರಖ್ಯಾತರಾಗಿದ್ದಾರೆ.


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ